Sunday, March 11, 2007

ಸಂದಿಗ್ಧ

ಭಾವಗಳು ನೂರುಂಟು
ಹೃದಯಾಂತರಾಳದಲ್ಲಿ ಭಾವಗಳು ನೂರುಂಟು
ಆದರೇಕೋ ಅವಕಿಲ್ಲ ಜೀವ
ಪ್ರೀತಿ ಹೃದಯವೇ ದೂರಾದ ಮೇಲೆ
ಅವಕೆಲ್ಲಿಂದ ಬಂದೀತು ಜೀವ


ನೋವುಗಳು ನೂರೆಂಟು
ಮನದಾಳದಲ್ಲಿ ನೋವುಗಳು ನೂರೆಂಟು
ಆದರೇಕೋ ಅವಕಿಲ್ಲ ಸಾವ
ನೋವುಗಳೆಲ್ಲ ಉಸಿರಲ್ಲೆ ಬೆರೆತಿರುವಾಗ
ಬಂದೀತಾದರು ಅವಕೆಲ್ಲಿಂದ ಸಾವ


- ಲಕ್ಷ್ಮೀಶ ನಡಹಳ್ಳಿ
ಬೆಂಗಳೂರು

3 comments:

Sushrutha Dodderi said...

ಈ ಸಲದ ಬೇಸಿಗೆ ಸರಿ ಇದ್ದಂತಿಲ್ಲ! ಯಾರನ್ನು ನೋಡಿದರೂ 'ಪ್ರೀತಿ ಹೃದಯ ದೂರಾದ' ಬಗ್ಗೆಯೇ ದೂರುತ್ತಾರೆ! Anyways, ಪುಟ್ಟ-ಚೊಕ್ಕ ಕವನ.

ಶ್ಯಾಮಾ said...

ನೋವುಗಳೆಲ್ಲ ಉಸಿರಲ್ಲೆ ಬೆರೆತಿರುವಾಗ
ಬಂದೀತಾದರು ಅವಕೆಲ್ಲಿಂದ ಸಾವ.........

ತುಂಬಾ ತುಂಬಾ ಚೆನ್ನಾಗಿದ್ದು..... ಅದ್ರಲ್ಲೂ ಈ ಎರಡು ಸಾಲು......... ಮತ್ತೆ ಮತ್ತೆ ಓದುವಂತೆ ಮಾಡ್ತು ಕವನವನ್ನಾ..

Anonymous said...

wah.. wah..... super:)